Thursday, January 15, 2009

ಮನಸು

ಮನಸೇ ನಿನ್ನಲರಿಯಲು ಆಗದು ನನಗೆ.
ಹೇಗೆ ಅರಿಯಲಿ ತಿಳಿಸು ಎನಗೆ.
ನಿನ್ನ ಆಳ ಯಾರು ಬಲ್ಲರು?
ನನಗಂತು ಅರಿಯದು .
ಹೇಳುವರು ಕೆಲವರು ಎನಗೆ.
ನನ್ನನ್ನು ಅವರು ಬಲ್ಲರು ಎಂದು.
ಅದು ಹೇಗೋ ನಾನು ಅರಿಯೆ.
ನನಗೆ ಎನ್ನ ಬಗ್ಗೆ ತಿಳಿಯದೆ ಇರಲು
ಅವರಿಗೆ ಹೇಗೆ ತಿಳಿಯಿತು ಎಂದು.
ಕೊಂಚ ವಿಷಯವು ಸಾಕು ನಿನಗೆ
ನನ್ನನ್ನು ಅದಲು ಬದಲು ಮಾಡುವುದಕ್ಕೆ,
ಯೋಚನಾ ಲಹರಿಯಲ್ಲಿ ಕೊಂಡೊಯ್ಯುವುದಕ್ಕೆ .
ಒಮ್ಮೆ ಸರಿಎನಿಸಿದ್ದು ಮತೊಮ್ಮೆ ತಪ್ಪು ಅನಿಸುವುದೇಕೋ
ಏನೋ ಎಂತೋ ತಿಳಿಯದು ಎನಗೆ .
ನಿನ್ನಳರಿಯುವ ಯತ್ನದಲ್ಲಿ ಕಾಲವ ತಳ್ಳುತಿರುವೆ.
ಅದು ಎಂದು ಅರಿವೆನೊ, ಅಂದು ನನ್ನ ಜೀವನದ ದಾರಿ ಸುಗಮವದಂತೆ.
ಜೀವನದ ಮುಕ್ತಿ ಪಥವ ಅರಿತಂತೆ.


1 comment:

  1. A good effort to start with... I wish, let more number of writings blossom in your "Manasu" in coming days...

    ReplyDelete